Saturday, June 21, 2008

ಅಡಿಕೆ ಪತ್ರಿಕೆ ಹೇಳಿದ ಸದಾಸಂ ಕಥೆ

ನಾನು ಸದಾಸಂ ತರಿಸಿದ ಬಗೆಗೆ ಅಡಿಕೆ ಪತ್ರಿಕೆ ಒಕ್ಟೋಬರ್ 2007 ಸಂಚಿಕೆಯಲ್ಲಿ ಒಂದು ಸಚಿತ್ರ ಲೇಖನ ಪ್ರಕಟಿಸಿತ್ತು.  ಕೊನೆಗೂ ಮೆ 2007ರಲ್ಲಿ ಚೀನಾದಿಂದ ತರಿಸುವ ತೀರ್ಮಾನ ಮಾಡಿ ಹಣ ರವಾನಿಸಿದೆ.


ಪರದೇಶದಿಂದ ವಾಹನ ತರಿಸುವುದು ಎಂದರೆ ಹತ್ತೆಂಟು ಅಡೆಚಣೆಗಳನ್ನು ದಾಟಬೇಕಾಗುತ್ತದೆ. ನಮಗೆ ಹಿಂಬಾಲಿಸಲು ಸಹಾಯಕ ಎನಿಸಬಹುದಾದ ಹಿಂದೆ ಈ ತರಹದ ವಾಹನಗಳ ತರಿಸಿದ ಉದಾಹರಣೆಗಳು ಅಲಬ್ಯವಾಗಿ ಬಹಳ ಗೊಂದಲವಾಗಿರುತ್ತದೆ. ಸುಂಕದ ಅಧಿಕಾರಿಗಳ ಪುಸ್ತಕದಲ್ಲಿ ಈ ವಾಹನದ ಬಗ್ಗೆ ಮಾಹಿತಿ ಇರಲಿಲ್ಲ. ಇದಕ್ಕೆ ಎಷ್ಟು ಸುಂಕ ಎನ್ನುವುದು ಅವರಿಗೂ ಅಸ್ಪಷ್ಟ. ಹೀಗೆ   ಪ್ರತಿಯೊಂದು ಹೆಜ್ಜೆಯಲ್ಲೂ ಗಲಿಬಿಲಿ. ಅಂತೂ ಇಂತೂ ಹಣ ಕಳುಹಿಸಿ ಎಪ್ಪತ್ತೈದು ದಿನಗಳಲ್ಲಿ ಸದಾಸಂ ಲಾರಿಯಲ್ಲಿ ಬಂದು ನಮ್ಮ ಅಂಗಳದಲ್ಲಿ ಇಳಿಯಿತು. ಮಳೆ ಬರುವ ಲಕ್ಷಣ ಕಂಡು ಗಡಿಬಿಡಿಯಲ್ಲಿ ಪೆಟ್ಟಿಗೆ ಕಳಚಿ ನಮ್ಮ ಹಳೆ ಮನೆಯೊಳಗೆ ಸಾಗಿಸಿದ್ದಾಯಿತು.



ಮುಂದಿನ ಎರಡು ದಿನಗಳಲ್ಲಿ ಚಕ್ರಕ್ಕೆ ಗಾಳಿ ಹಾಕಿ ಪೆಟ್ರೋಲ್ ತುಂಬಿಸಿದ ನಂತರ ಈ ವಾಹನ ನಮ್ಮ ಅಂಗಳದಲ್ಲಿ ಓಡಾದಲು ಪ್ರಾರಂಬಿಸಿತು. ಚಾಲನೆ ನಮ್ಮ ಇತರ ಎಲ್ಲ ವಾಹನಗಳಿಗೆ ಬಿನ್ನವಾಗಿರುವ ಕಾರಣ ಹೆಚ್ಚು ಹಳೆಯ ಅನುಭವಗಳ ತಾತ್ಕಾಲಿಕವಾಗಿ ಮರೆತು ಹೊಸತಾಗಿ ಕಲಿತೆವು. ವಿವರಗಳಿಗೆ ಈ ಲೇಖನ ಓದಿ. ಅದರ ಮೇಲೆ ಕ್ಲಿಕ್ಕಿಸಿದರೆ ಅದು ದೊಡ್ಡ ಪುಟವಾಗಿ ಮೂಡುತ್ತದೆ.

No comments: